ಸೈಬರ್ ಕೆಫೆಗೆ ಬ್ರೌಸ್ ಮಾಡಲು ಹೋಗೋರೆಲ್ಲಾ ಇನ್ಮುಂದೆ ಸ್ವಲ್ಪ ಎಚ್ಚರದಿಂದಿರಬೇಕು.

ಯಾರು? ಯಾವಾಗ ಯಾವುದೇ ಸೈಬರ್ ಕೆಫೆಗಳಲ್ಲಿ ಕುಳಿತು ಏನೇ ಬ್ರೌಜ್ ಮಾಡಿದ್ರೂ ಅದು "ಪೊಲೀಸ್ರಿಗೆ ಗೊತ್ತಾಗುತ್ತೆ. ಹೌದು ಇಂಥಾದೊಂದು ನೂತನ ತಂತ್ರಜ್ಞಾನವನ್ನ ಬಾಗಲಕೋಟೆ ಜಿಲ್ಲೆಯ ಎಲ್ಲ ಸೈಬರ್ ಕೆಫೆಗಳಲ್ಲಿ ಅಳವಡಿಸಲಾಗುತ್ತಿದೆ.  ಭಯೋತ್ಪಾದನಾ ಚಟುವಟಿಕೆಗಳನ್ನ ಹತ್ತಿಕ್ಕುವುದಕ್ಕಾಗಿ ಪೊಲೀಸ್ ಇಲಾಖೆ ಇಟ್ಟಿರುವ ಹೊಸ ಹೆಜ್ಜೆ ಇದು. ಜಿಲ್ಲೆಯ ಸುಮಾರು 120ಕ್ಕೂ ಹೆಚ್ಚು ಸೈಬರ್ ಕೆಫೆಗಳಲ್ಲಿ ಈಗ ಐಟಿ ಆಕ್ಟ್ ಆಧಾರಿತವಾಗಿ ಒಂದು ನೂತನ ತಂತ್ರಜ್ಞಾನದ ಸಾಫ್ಟವೇರನ್ನ ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.  ಐಟಿ 2000 ಕಾನೂನು ಪಾಲನೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನ ತಡೆಯುವುದಕ್ಕಾಗಿ ಖಾಸಗಿ ಕಂಪನಿಯೊಂದರ ಸಹಯೋಗದೊಂದಿಗೆ "ಐ ಕೆಫೆ ಮ್ಯಾನೇಜರ್" ಎಂಬ ಸಾಫ್ಟವೇರ್ ಅನ್ನು ಅಳವಡಿಸಲಾಗುತ್ತಿದೆ. ಇದರಿಂದ ಸೈಬರ್ ಕೆಫೆಗಳಿಗೆ ಬರುವ ಪ್ರತಿಯೊಬ್ಬ ಗ್ರಾಹಕನ ಮಾಹಿತಿ ಸಂಗ್ರಹವಾಗಲಿದೆ. ಈ ತಂತ್ರಜ್ಞಾನವನ್ನ ಖಾಸಗಿ ಕಂಪನಿ ಹಾಗೂ ಪೊಲೀಸ್ ಇಲಾಖೆ ಸೇರಿ ಜಂಟಿಯಾಗಿ "ಫ್ರೀ"ಯಾಗಿ ಅಳವಡಿಸುತ್ತಿದ್ದಾರೆ. ಇದರಿಂದ ಹೆಚ್ಚಿತ್ತಿರುವ ಸೈಬರ್ ಅಪರಾಧಗಳಗೆ ಕಡಿವಾಣ ಹಾಕಬಹುದು ಅಂತಾರೆ ಪೊಲೀಸ್ ವರಿಷ್ಠಾಧಿಕಾರಿ ಈಶ್ವರ ಚಂದ್ರವಿದ್ಯಾ ಸಾಗರ.

source:Suvarna News