ಪ್ರವಾಹ ; ವಿಪತ್ತು ನಿರ್ವಹಣೆಗೆ ಬಾಗಲಕೋಟೆ ಜಿಲ್ಲಾಡಳಿತ ಸಜ್ಜು

ಪ್ರವಾಹ ; ವಿಪತ್ತು ನಿರ್ವಹಣೆಗೆ ಬಾಗಲಕೋಟೆ ಜಿಲ್ಲಾಡಳಿತ ಸಜ್ಜು

Posted by Bhaskar Managol on Sunday, July 31, 2011

   ಬಾಗಲಕೋಟೆ, ಕೃಷ್ಣಾ ಕಣಿವೆ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಇಂದು ಬೆಳಿಗ್ಗೆ 40 ಸಾವಿರ ಕ್ಯುಸೆಕ್ಸ ನೀರು ಬಿಡಲಾಗಿದ್ದು ನದಿ ದಂಡೆ ಪ್ರದೇಶದ ಗ್ರಾಮಗಳಲ್ಲಿ ಪ್ರವಾಃ ಮುನ್ನೆಚ್ಚರಿಕೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ವಿಪತ್ತು ನಿರ್ವಹಣಾ ಪಡೆಯನ್ನು ಅಣಿಗೊಳಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಇಂದು ಸಂಜೆ ಮತ್ತೆ 80 ಸಾವಿರ ಕ್ಯೂಸೆಕ್ಸ ನೀರು ಬಿಡಲಾಗಿದ್ದು ಆದರೆ 2.5 ಲಕ್ಷ ಕ್ಯೂಸೆಕ್ಸ ನೀರಿನ ಹರಿವಿನ ವರೆಗೂ ಪ್ರವಾಹದ ಆತಂಕವಿಲ್ಲದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಗಲಕೋಟೆ ಉಪವಿಭಾಗಾಧಿಕಾರಿ ಗೋವಿಂದರೆಡ್ಡಿ ಇಂದು ಸಂಯುಕ್ತ ಕನರ್ಾಟಕಕ್ಕೆ ತಿಳಿಸಿದರು. ಕೋಯ್ನಾದಿಂದ 40 ಸಾವಿರ ಕ್ಯೂಸೆಕ್ಸ ನೀರು ಆಲಮಟ್ಟಿ ಜಲಾಶಯದತ್ತ ಹರಿದು ಬರುತ್ತಿದೆ.

ನದಿ ಬಳಿ ಸುಳಿಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ, ದನ ಕರುಗಳನ್ನು ಬಿಡದಂತೆ ಸೂಚಿಸಲಾಗಿದೆ, ಈ ಬಗ್ಗೆ ಡಂಗುರಸಾರಿಸಲಾಗಿದ್ದು ನಿರಂತರವಾಗಿ ಕಟ್ಟೆಚ್ಚರ ವಹಿಸಿ ಸಿಬ್ಬಂದಿಯನ್ನು ಅಣಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೃಷ್ಣಾ ಕಣಿವೆಯಲ್ಲಿ ಮಳೆ ಸುರಿಯುತ್ತಿದ್ದು ಘಟಪ್ರಭಾ, ಮಲಪ್ರಭಾ ಬಳಿ ಮಾತ್ರ ಮಳೆ ಕಡಿಮೆಯಾಗಿದೆ, ಹೀಗಾಗಿ ಪ್ರವಾಹದ ಆತಂಕ ಉಂಟಾಗಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ಸೂಚನೆ ನೀಡಿದ್ದಾರೆ. ತಾಲೂಕಾ ಕೇಂದ್ರದಲ್ಲಿ ಫೈಬರ್ ದೋಣಿಗಳನ್ನು ಅಣಿಗೊಳಿಸಲಾಗಿದ್ದು ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಲ್ಲಿ 24 ದೋಣಿಗಳನ್ನು ಕಾಯ್ದಿರಿಸಲು ಸೂಚಿಸಿದ್ದಾರೆ.

ಆಲಮಟ್ಟಿ ಜಲಾಶಯದಿಂದ 10 ಗೆಟ್ಗಳನ್ನು ತೆರೆದು 40 ಸಾವಿರ ಕ್ಯೂಸೆಕ್ಸ ನೀರನ್ನು ನಾರಾಯಣಪೂರ ಜಲಾಶಯಕ್ಕೂ 40 ಸಾವಿರ ಕ್ಯೂಸೆಕ್ಸ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆಯ ಸೂಚನೆ ನೀಡಲಾಗಿದೆ.